`ಸ್ವೀಟಿ` ಸಿದ್ದ
Posted date: 11 Fri, Oct 2013 – 08:23:14 AM

ಎಚ್.ಡಿ.ಕುಮಾರಸ್ವಾಮಿ ಅರ್ಪಿಸುವ, ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾಕುಮಾರಸ್ವಾಮಿ ಅವರು ನಿರ್ಮಿಸಿರುವ ‘ಸ್ವೀಟಿ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.  
    ‘ಸ್ವೀಟಿ ಚಿತ್ರಕ್ಕೆ ‘ನನ್ನ ಜೋಡಿ ಎಂಬ ಅಡಿಬರಹವಿದೆ.  ವಿಜಯಲಕ್ಷ್ಮೀಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್‌ಜನ್ಯರ ಸಂಗೀತ ನೀಡಿದ್ದಾರೆ. ಅಜಯ್ ವಿನ್ಸಂಟ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಇಮ್ರಾನ್, ಮುರಳಿ ನೃತ್ಯ ನಿರ್ದೇಶನ ‘ಸ್ವೀಟಿ ಚಿತ್ರಕ್ಕಿದೆ. ರವಿರಾಜ್ ಹಾಗೂ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಆದಿತ್ಯ, ರಾಧಿಕಾ, ರಮ್ಯಕೃಷ್ಣ, ಗಿರೀಶ್ ಕಾರ್ನಾಡ್, ಸಾಧುಕೋಕಿಲಾ, ಉಮಾಶ್ರೀ, ತಬಲನಾಣಿ, ಶರತ್‌ಲೋಹಿತಾಶ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed